ಕರ್ನಾಟಕದವರಾದ ಚಳ್ಳಕೆರೆ ಕರೀಮ್ ಜಾಫರ್ ಶರೀಫ್' '(3 ನವೆಂಬರ್ 1933 - 25 ನವೆಂಬರ್ 2018) ಭಾರತ ಸರಕಾರದ ಹಿರಿಯ ರಾಜಕಾರಣಿಯಾಗಿದ್ದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. 1991-95ರಲ್ಲಿ ಅವರು ಭಾರತ ಸರ್ಕಾರ ರೈಲ್ವೇ ಸಚಿವರಾಗಿದ್ದರು. . == ವೈಯಕ್ತಿಕ ಜೀವನ == 1999 ರಲ್ಲಿ ಅವರ ಕಿರಿಯ ಪುತ್ರ, 2008 ರಲ್ಲಿ ಅವರ ಪತ್ನಿ ಮತ್ತು ಲೋಕಸಭೆ ಚುನಾವಣೆಗೆ ಮೂರು ದಿನಗಳ ಮೊದಲು 2009 ರಲ್ಲಿ ಅವರ ಹಿರಿಯ ಮಗ ಹೀಗೆ ಜಾಫರ್ ಶರೀಫ್ ಅವರು ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡಿದ್ದರು. ಸಿ.ಕೆ. ಜಾಫರ್ ಶರೀಫ್ ಬೆಂಗಳೂರಿನಲ್ಲಿ 85 ನೇ ವಯಸ್ಸಿನಲ್ಲಿ ನವೆಂಬರ್ 25, 2018 ರಂದು ಮರಣಹೊಂದಿದರು. == ರಾಜಕೀಯ ಜೀವನ == ಎಸ್.ನಿಜಲಿಂಗಪ್ಪರ ಕಾಲದಲ್ಲಿ ಜಾಫರ್ ಶರೀಫ್ ತಮ್ಮ ವೃತ್ತಿಜೀವನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಪ್ರಾರಂಭಿಸಿದರು. ಕಾಂಗ್ರೆಸ್‌ನಲ್ಲಿ ವಿಭಜನೆಯಾದ ನಂತರ ಅವರು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಐ(ಇಂದಿರಾ ಕಾಂಗ್ರೆಸ್) ಪಕ್ಷವನ್ನು ಸೇರಿಕೊಂಡರು. ರೈಲ್ವೆ ಸಚಿವರಾಗಿ, ರಾಜ್ಯದಲ್ಲಿ ರೈಲ್ವೆಯ ಗೇಜ್ ಮಾರ್ಪಾಡು ಸಾಧನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು, ಆ ಸಂದರ್ಭದಲ್ಲಿ ರೈಲ್ವೆಯ ಎಲ್ಲಾ ಅಥವಾ ಹೆಚ್ಚಿನ ವಿವಿಧ ಗೇಜ್‍ಗಳನ್ನು ವಿಶಾಲ ಗೇಜ್‍ಗಳಾಗಿ ಪರಿವರ್ತಿಸಲಾಯಿತು. ಇದರಿಂದಾಗಿ ರೈಲ್ವೆಗೆ ಸಾಕಷ್ಟು ಹಣವನ್ನು ಉಳಿಸಿ ಕೊಟ್ಟರು. == ಬಾಹ್ಯ ಕೊಂಡಿಗಳು == ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಇನ್ನಿಲ್ಲ;ಪ್ರಜಾವಾಣಿ;;25 ನವೆಂಬರ್ 2018 ://..//._K._Jaffer_Sharief == ಉಲ್ಲೇಖ ==